Our
Projects
Mudra means “seal,” “gesture,” or “mark.” Yoga mudras are symbolic gestures often practiced with the hands and fingers that facilitate the flow of energy in the subtle body and enhance the journey within. Explore yoga mudras and discover how to incorporate them into your practice.
This yoga mudra workshop is happen on every month 4 Saturday. Specially you learn about many mudra with Kubera Mudra activation.
ಮುದ್ರಾ ವಿಜ್ಞಾನ
ಜ್ಞಾನ ದೇಗುಲ ಭಾರತ. ಕೃತ, ತ್ರೇತಾ, ದ್ವಾಪರದ ಲಕ್ಷಾಂತರ ವರ್ಷಗಳಿಂದ ಜಗತ್ತಿಗೆ ಶುದ್ಧ ಜ್ಞಾನ ವಿಜ್ಞಾನವನ್ನು ಪ್ರಸಾರ ಮಾಡುತ್ತ "ಕೃಣ್ವಂತೋ ವಿಶ್ವಮಾರ್ಯಂ", ವಿಶ್ವದ ಎಲ್ಲ ಮಾನವ ಜನಾಂಗವನ್ನು ಆರ್ಯರನ್ನಾಗಿ ಅಂದರೆ ಶ್ರೇಷ್ಠರನ್ನಾಗಿ ಸುಸಂಸ್ಕೃತರನ್ನಾಗಿಸುವುದನ್ನೇ ಧೈಯವಾಗಿಟ್ಟುಕೊಂಡು ನಿಃಸ್ವಾರ್ಥ ಬುದ್ದಿಯಿಂದ ನಮ್ಮ ಮಹರ್ಷಿಗಳು ತಮ್ಮನ್ನು ತಾವೇ ತಪಿಸಿಕೊಂಡು (ಸುಟ್ಟುಕೊಂಡು) ಹಲವಾರು ಜ್ಞಾನ ವಿಜ್ಞಾನ ಪ್ರತಿಪಾದ್ಯಗಳಾದ ವೇದೋಪನಿಷತ್ತುಗಳನ್ನು ಜಗತ್ತಿಗೇ ನೀಡಿದ್ದಾರೆ.
ಪ್ರಸಕ್ತ ಕಲಿಯುಗದ ಐದು ಸಾವಿರ (5000) ವರ್ಷಗಳಿಂದ ಯೋಗಿರಾಜ ಭಗವಾನ್ ಶ್ರೀಕೃಷ್ಣನಿಂದ ಮೊದಲ್ಗೊಂಡು ಪತಂಜಲಿಯವರೆಗೆ ಅನೇಕ ಋಷಿ ಮುನಿಗಳು ಹೊಸ ಹೊಸ ಸಂಶೋಧನೆಗಳಿಂದ, ಪ್ರಯೋಗಗಳಿಂದ ರಸಪಾಕ 'ಯೋಗ' ಜ್ಞಾನವನ್ನು ಜನಸಾಮಾನ್ಯನವರೆಗೂ ಪ್ರಸರಿಸಿದ್ದಾರೆ.
ಆದರೆ ಕಾಲಖಂಡದಲ್ಲಿ ನಮ್ಮ ಪವಿತ್ರ ಭೂಮಿಯ ಮೇಲೆ ಆದ ಆಕ್ರಮಣಗಳಿಂದ, ಹಲವು ವಿದೇಶೀ ಸಂಸ್ಕೃತಿಗಳು ನಮ್ಮ ಭಾರತೀಯ, ಹಿಂದೂ ಸಂಸ್ಕೃತಿಯ ಜೀವನ ಪದ್ಧತಿಯನ್ನೇ ಅಲುಗಾಡಿಸುವ ಪರಿಸ್ಥಿತಿ ಇಂದು ಉಂಟಾಗಿದೆ. ನಮ್ಮ ಜ್ಞಾನ ಭಂಡಾರಗಳಾದ ಆರ್ಷೇಯ ವೇದ, ಉಪನಿಷತ್ತುಗಳ, ಜ್ಞಾನ ವಿಜ್ಞಾನಗಳನ್ನು ಹಳಿದು ಮೂಲೆಗೊತ್ತಿ ತಮ್ಮ ಆಧುನಿಕ ವಿಜ್ಞಾನವೇ ಸರ್ವಶ್ರೇಷ್ಠವೆಂದು ನಮ್ಮ ಜನತೆಯ, ಹಾಗೂ ಬುದ್ದಿ ಜೀವಿಗಳ ಮಸ್ತಿಷ್ಕದಲ್ಲಿ ವಿದೇಶೀಯರು ಬಿತ್ತಿದ್ದು ನಮ್ಮ ತನವನ್ನೇ ನಾವು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತಿದೆ.
ಅಂತಹ ಕಳೆದುಹೋಗುತ್ತಿದ್ದ ಶಾಸ್ತ್ರಗಳಲ್ಲಿ 'ಯೋಗ'ವೂ ಒಂದು, ಇದರ ಪ್ರಕಾರಗಳು ಹಲವು. ಅಷ್ಟಾಂಗ ಯೋಗದ ಸತತ ಅಭ್ಯಾಸದಿಂದ ನಮ್ಮ ಋಷಿಗಳು ನಿರೋಗಿ, ದೃಢಕಾಯಿ, ದೀರ್ಘಾಯಷಿಗಳಾಗಿ ಜಗತ್ತಿಗೇ ಜ್ಞಾನ ಪ್ರಸಾರ ಮಾಡುತ್ತಿದ್ದುದು ಸ್ವಯಂ ವೇದ್ಯ. ಅಂತಹ ಹಲವಾರು ಜ್ಞಾನಕಾಂಡಗಳನ್ನು 'ಎಲೆ ಮರೆಯ ಕಾಯಿ'ಯಂತೆ ಸಂರಕ್ಷಿಸಿಟ್ಟು ಅನೇಕ ಮಹನೀಯರು ಈಗ ಅವುಗಳನ್ನು ಪ್ರಕಾಶಕ್ಕೆ ತರುತ್ತಿದ್ದಾರೆ.
ಆಧುನಿಕ ಭಾರತದ ಯೋಗ ಪ್ರವರ್ತಕರಾಗಿ ದೇಶ ವಿದೇಶದ ಶಿಷ್ಯರುಗಳಿಗೂ 'ಯೋಗ' ಜ್ಞಾನ ಪ್ರಸಾರ ಮಾಡಿದ, ಮೀಮಾಂಸಾತೀರ್ಥ, ವೇದಾಂತ ವಾಗೀಶ, ಸಾಂಖ್ಯ ಯೋಗ ಶಿಖಾಮಣಿ ಇತ್ಯಾದಿ ಬಿರುದಾಂಕಿತರಾದ ಪರಮಪೂಜ್ಯ ತಿರುಮಲೆ ಕೃಷ್ಣಮಾಚಾರ್ಯರು ಮೊದಲಿಗರು.
ಕುಲಾರ್ಣವ ಗ್ರಂಥದಲ್ಲಿ 'ಮುದ್ರೆಯನ್ನು' 'ಮುದ' ಎಂದರೆ, ಸಂತೋಷ ಆನಂದವೆಂದೂ 'ದ್ದ' ಧಾತುವಿನ ರೂಪ 'ದ್ರವ್', ಮುದ್+ ದ್ರವ್ ಸೇರಿ 'ಮುದ್ರಾ' ಆಗಿದೆ ಎಂಬ ಉಲ್ಲೇಖವಿದೆ.
ಸಾಂಪ್ರದಾಯಿಕವಾಗಿ ಜಪ ಪೂಜಾದಿಗಳಲ್ಲಿ ಉಪಯೋಗಿಸುವ ನ್ಯಾಸಗಳಾದ, ಅಂಗನ್ಯಾಸ, ಕರನ್ಯಾಸಗಳೂ "ಮುದ್ರಾ" ಗಳ ಭಾಗವೇ ಆಗಿದೆ.
'ಅಷ್ಟೇ' ನಿಘಂಟಿನ 'ಮುದ್' ಶಬ್ದದ ಅರ್ಥ ಸಂತೋಷದಾಯಕ, ಆನಂದಪ್ರದ. 'ದ್ದ 'ಧಾರಣೆ-ಧರಿಸುವುದು ಹೊಂದುವುದು ಎಂಬ ಅರ್ಥ. ಎರಡೂ ಪದಗಳು ಸೇರಿ 'ಮುದ್ರಾ' ಪದವಾಗಿ ಆನಂದಪ್ರದ, ಸಂತೋಷವನ್ನೇ ನೀಡುವ ಚಟುವಟಿಕೆ ಎಂಬ ಅರ್ಥವನ್ನು ನೀಡುತ್ತದೆ.
ಆರೋಗ್ಯಕ್ಕಿಂತ ಮಿಗಿಲಾದ ಐಶ್ವರ್ಯವಿಲ್ಲ. ಆರೋಗ್ಯಕ್ಕಿಂತ ಮಿಗಿಲಾದ ಸಂತೋಷವಿಲ್ಲ, ಆರೋಗ್ಯದ ಸಂರಕ್ಷಣೆಯೂ ಆಗಿ ಆನಂದದಾಯಕವೂ ಆಗಬೇಕೆಂಬುದೇ 'ಮುದ್ರಾ' ಶಬ್ದದ ಅರ್ಥವಾದೀತು. "ಶರೀರಮಾದ್ಯಂ ಖಲುಧರ್ಮಸಾಧನಾ" ಎಂಬ ಋಷಿವಾಕ್ಯದಂತೆ ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಆರೋಗ್ಯ - ಅವುಗಳಿಗೆ ಸಂಬಂಧಿಸಿದ ಮುದ್ರೆಗಳಿಂದ ಲಭ್ಯ.
' ಮನುಷ್ಯ' ಪ್ರಕೃತಿಯ, ಭಗವಂತನ ಅತ್ಯಂತ ಉಚ್ಚತಮ ಶ್ರೇಷ್ಠ ಸೃಷ್ಟಿಯಾಗಿದ್ದಾನೆ. ಅದರಲ್ಲೂ ಕೈಗಳು ಮನುಷ್ಯದೇಹದ ಚಟುವಟಿಕೆಗಳ ಮುಖ್ಯ ಅಂಗವಾಗಿದೆ. ನಮ್ಮ ದೇಹದಿಂದ ಸರ್ವದಾ ಸತತವಾಗಿ ಒಂದು ವಿಧವಾದ ಶಕ್ತಿ ಪುಂಜ ಅಥವಾ ವಿದ್ಯುದಯಸ್ಕಾಂತ ತರಂಗಗಳು, ಕಿರಣಗಳು, ಪ್ರಭಾವಳಿಯಂತೆ(Aura) ಹೊರಹೊಮ್ಮುತ್ತಿರುತ್ತವೆ.
ನಮ್ಮ ದೇಹದಿಂದ ಹೊರಚಾಚಿಕೊಂಡಿರುವ ಅಂಗಗಳಾದ ಕೈ ಮತ್ತು ಕಾಲ್ವೆರಳುಗಳು, ಮೂಗಿನತುದಿ, ಕಿವಿಗಳು, ತುಟಿಗಳು ಇವುಗಳಿಂದ ನಮ್ಮ ದೇಹದ ವಿದ್ಯುದಯಸ್ಕಾಂತೀಯ ಅಲೆಗಳು ಸತತವಾಗಿ ಹೊರಹೊಮ್ಮುತ್ತಿರುತ್ತದೆ. ಹೀಗೆ ಹೊರ ಹೊಮ್ಮುವ ಶಕ್ತಿಯನ್ನು ಹಲವಾರು 'ಮುದ್ರೆ'ಗಳ ಮೂಲಕ ತಡೆದು, ಹೊರಹೋಗುತ್ತಿರುವ ಶರೀರದ ಚೈತನ್ಯವನ್ನು ದೇಹಕ್ಕೆ ಹಿಂದಿರುಗಿಸಿ ಮಾನಸಿಕ ದೈಹಿಕ ಹಾಗೂ ಬೌದ್ಧಿಕ ಆರೋಗ್ಯವನ್ನು, ದೀರ್ಘಾಯುವನ್ನು ಸಾಧಿಸಬಹುದಾಗಿದೆ.
ಪಂಚಭೌತಿಕ ತತ್ವಗಳ ಪ್ರತೀಕವಾದ ಕೈ ಬೆರಳುಗಳನ್ನು ಉಜ್ಜಿದಾಗ ಉಂಟಾಗುವ ಶಾಖ ಮತ್ತು ನಮ್ಮ ಮೆದುಳಿನ ಮಾನಸಿಕ ಶಕ್ತಿ ತರಂಗಗಳ ಕೇಂದ್ರೀಕರಣಗಳಿಂದ ನಮ್ಮ ದೇಹದ ನೋವಿನ ಯಾವುದೇ ಭಾಗವನ್ನು ಬೆರಳುಗಳಿಂದ ತಡವಿದಾಗ ನೋವುನಿವಾರಣೆ ಆದೀತು. ಬೆರಳುಗಳ ಘರ್ಷಣೆಯಿಂದ ಹೊರಡುವ ಕಿರಣಗಳಿಂದ ದೇಹದ ಭಾಗಗಳನ್ನು ಸರಿಪಡಿಸಿ ಸೌಂದರ್ಯವರ್ಧಿಸುವ ಚೈತನ್ಯ ಬೆರಳುಗಳಿಗಿದೆ.
ಮುದ್ರಾ ವಿಜ್ಞಾನ
ಇಂದು ಪ್ರಪಂಚದಲ್ಲೆಲ್ಲಾ ಪ್ರಸಿದ್ಧವಾಗಿ ಪ್ರಚಲಿತವಾಗಿರುವ 'ಆಕ್ಯುಪ್ರೆಜರ್' ಚಿಕಿತ್ಸಾ ವಿಧಾನವೂ ಸಹಾ ನಮ್ಮ ದೇಶದ ಶಾಸ್ತ್ರವೇ ಆಗಿದ್ದರೂ ಇಂದು ನಾವು ಅದನ್ನು ಪೌರ್ವಾತ್ಯರಿಂದ ಕಲಿಯಬೇಕಾದ ಪರಿಸ್ಥಿತಿ ಉಂಟಾಗಿದೆ. "ಮರ್ದನ" ಎಂಬ ಕ್ರಿಯೆ ನಮ್ಮಲ್ಲಿ ಪುರಾತನ ಕಾಲದಿಂದ ಪ್ರಚಲಿತವಿದ್ದು, ಇಂದೂ ಸಹಾ ಹಿರಿಯರು ತಮಗೆ ಆಯಾಸವಾದಾಗ ಮಕ್ಕಳ ಕೈಲಿ ಕೈ, ಕಾಲು, ಬೆನ್ನು ಇತ್ಯಾದಿಗಳನ್ನು ತುಳಿಸಿಕೊಳ್ಳುವುದು, ಕೈಬೆರಳುಗಳಿಂದ ತಲೆಯನ್ನು ಒತ್ತಿಸಿಕೊಳ್ಳುವುದನ್ನು ಗಮನಿಸಿರಬಹುದು. ಈ ಕ್ರಿಯೆಗಳು ನಮ್ಮ ಆರೋಗ್ಯದ ಬೀಗದಕೈ, ನಮ್ಮ ಕೈಬೆರಳುಗಳಲ್ಲಿಯೇ ಇರುವುದೆಂಬುದನ್ನು ದೃಢಪಡಿಸುವ ಚಿಕಿತ್ಸಾಕ್ರಮವಾಗಿ ಇಂದು "ಮುದ್ರಾವಿಜ್ಞಾನ"ವು ಪ್ರಚಲಿತಗೊಳ್ಳುತ್ತಿದೆ.
ಇಂದು ಆಧುನಿಕ ವಿಜ್ಞಾನವೂ ಸಹಾ ನಮ್ಮ ಪ್ರತಿಯೊಂದೂ ಬೆರಳುಗಳಿಂದ ಬೇರೆ ಬೇರೆ ವಿಧವಾದ ವಿದ್ಯದಯಸ್ಕಾಂತ ತರಂಗಗಳು ಹೊರಹೊಮ್ಮುತ್ತಿರುವುದನ್ನು ಒಪ್ಪಿ ದೃಢೀಕರಿಸಿವೆ. ನಮ್ಮ ಪ್ರಾಚೀನ ಋಷಿಗಳು ಇದನ್ನರಿತೇ (ವಿಜ್ಞಾನಿಗಳನ್ನು ನಾವು ಋಷಿಗಳೆನ್ನುತ್ತೇವೆ) ಈ "ಮುದ್ರಾವಿಜ್ಞಾನ" ಅಥವಾ "ತತ್ವವಿಜ್ಞಾನ" ವನ್ನು ಆವಿಷ್ಕಾರ ಮಾಡಿದ್ದಾರೆ. ಅವರ ಸಂಶೋಧನೆಯಂತೆ, ಕೈಬೆರಳುಗಳನ್ನು ವಿಶಿಷ್ಟ ವಿಧಾನದಲ್ಲಿ, ವಿನ್ಯಾಸದಲ್ಲಿ ಮಡಿಸಿ, ಸ್ಪರ್ಷಿಸಿ, ಸಂಯೋಜಿಸಿಕೊಳ್ಳುವ 'ಮುದ್ರೆ' ಗಳೇ ಅಲ್ಲದೆ, ಹಸ್ತಗಳೆರಡನ್ನು ಜೋಡಿಸುವುದು, ಚಪ್ಪಾಳೆ ತಟ್ಟುವುದು ಹಾಗೂ ಕೈಗಳ ವಿಶಿಷ್ಟ ಬಿಂದುಗಳನ್ನು ಅಮುಕುವುದೇ ಮೊದಲಾದ ಕ್ರಿಯೆಗಳಿಂದ ನಮ್ಮ ದೇಹದಲ್ಲಿ ಏರುಪೇರಾಗಿರುವ ಪಂಚಭೂತ/ತತ್ವಗಳ ಸಮತೋಲನವನ್ನು ಸಾಧಿಸಿ ಯಾವುದೇ ವಿಧವಾದ ಖಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದಾಗಿದೆ. ಈ 'ಯೋಗ ಮತ್ತು ಮುದ್ರೆ'ಗಳ ಸಹಾಯದಿಂದಲೇ ಋಷಿಗಳು ನೂರಾರು ಸಾವಿರಾರು ವರ್ಷಗಳು ನಿರೋಗಿಗಳಾಗಿ ಯಶಸ್ವೀ ಬದುಕನ್ನು ನಿರ್ವಹಿಸಿದ್ದುದಲ್ಲದೆ ಹಲವರು ಚಿರಂಜೀವಿಗಳಾಗಿರುವುದನ್ನೂ ಸಹಾ ನಾವು ಪ್ರತಿದಿನವೂ ಸ್ಮರಿಸಿಕೊಳ್ಳುತ್ತೇವೆ.
ಅಶ್ವತ್ಥಾಮಾಬಲಿರ್ವ್ಯಾಸೋಹನುಮಾಂಶ್ಚವಿಭೀಷಣಃ॥
ಕೃಪಃಪರಶುರಾಮಶ್ಚ ಸಪ್ಪೆತೇ ಚಿರಜೀವಿನಃ||
ಇಂತಹ ಮಹಾಪುರುಷರುಗಳ ದೀರ್ಘಾಯಸ್ಸಿನ ರಹಸ್ಯವು ಅವರುಗಳ ಯೋಗ, ಮುದ್ರಾ ಸಾಧನೆಗಳಿಂದ ಸಾಧಿತವಾಗಿ ಅದು ನಮ್ಮಲ್ಲೂ ಇದೆ. ಎಂಬುದನ್ನು ಅರಿತುಕೊಳ್ಳಬೇಕಾಗಿದೆ
ಇದೇ ರೀತಿಯಾದ ಮುದ್ರೆಗಳನ್ನು ನಮ್ಮ ಸಂಸ್ಥೆಯಲ್ಲಿ ಅಭ್ಯಾಸ ಮಾಡಿ ಎಷ್ಟೋ ಜನಗಳು ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ, ಸದೃಢರಾಗಿದ್ದಾರೆ.
ಹಲವಾರು ಪ್ರಕಾರದ ಮುದ್ರೆಗಳು
1.ಶಾಸ್ತ್ರೀಯ ಮುದ್ರೆಗಳು.
2.ಚಿಕಿತ್ಸಾ ಮುದ್ರೆಗಳು.
3. ಧ್ಯಾನ ಆಧ್ಯಾತ್ಮಿಕ ಮಾನಸಿಕ ಮುದ್ರೆಗಳು.
4.ಗಾಯತ್ರಿ ಮುದ್ರೆಗಳು.
5.ಪೂಜಾ ಮುದ್ರೆಗಳು.
6.ಹಠಯೋಗ ಮುದ್ರಾ.
7.ಪ್ರಾಣಾಯಾಮ ಮುದ್ರೆಗಳು.
8.ಶಕ್ತಿ ಮುದ್ರೆಗಳು.
9. ನರ್ತನ ಮುದ್ರೆಗಳು.
10.ಚೈತನ್ಯದಾಯಿ ಮುದ್ರೆಗಳು.
11.ಚಕ್ರಗಳು - 7 ಚಕ್ರ ಮುದ್ರೆಗಳು.
Mudra Workshop
Yoga mudras are symbolic hand gestures used in yoga and meditation to channel energy, enhance concentration, and promote overall well-being. They are specific positions of the hands and fingers believed to influence the flow of prana (life force) in the body.

Guruji :
Sathyanarayana Swami Guruji







