top of page

The Month's Events

Discover

   

  ಧ್ಯಾನವನ್ನು ಕಲಿಯುವವರಿಗೆ ಉತ್ತಮವಾದ ಈ ಸದವಕಾಶ, ಸರಳವಾದ ವಿಧಾನ, ಉತ್ತಮ ಮಾರ್ಗದರ್ಶನ, ಈ ಸುಂದರ ಸದವಕಾಶವನ್ನು ಯಾರು ಕೂಡ ಕಳೆದುಕೊಳ್ಳಬಾರದು. ಮನುಕುಲದ ಉದ್ಧಾರ ಪ್ರಕೃತಿಯ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ.

“ಧ್ಯಾನ” ಎಂದ ಕೂಡಲೇ ಪರ್ವತದ ಮೇಲೆ, ನೀಲಿ ಮೋಡಗಳ ಕೆಳಗೆ ನಿಂತು ಧ್ಯಾನ ಮಾಡುವ ಯೋಗಿಗಳೆಂದು ನಮ್ಮ ತಲೆಗೆ ಬರುವುದು ಸಹಜ. ಆದರೆ, ಧ್ಯಾನ ಪ್ರತಿಯೊಂದು ಜೀವಿಗೂ ಸಂಬಂಧಿಸಿದ್ದಾಗಿದೆ. ಇತ್ತೀಚಿನ ಒತ್ತಡದ ಜೀವನಗಳಿಂದಾಗಿ ಧ್ಯಾನದ ಮಹತ್ವ ಎಲ್ಲರೂ ತಿಳಿದುಕೊಳ್ಳುವಂತಾಗುತ್ತಿದೆ. 
​​​​​


    ಯೋಗ ಗುರಿ 


ಎಲ್ಲ ಜೀವಾತ್ಮವೂ ಪರಮಾತ್ಮನ ಅಂಶ. ಶ್ರೀಕೃಷ್ಣ ಗೀತೆಯಲ್ಲಿ ಹೇಳುತ್ತಾನೆ: "ನನ್ನ ಅಂಶವೇ ಈ ಜೀವಕೋಶದಲ್ಲಿ ಜೀವರೂಪದಲ್ಲಿದ್ದುಕೊಡು ಮನಸ್ಸು, ಇಂದ್ರಿಯಗಳನ್ನು ಸೆಳೆಯುವುದು, ಜೀವವು ಶರೀರವನ್ನು ಪಡೆಯುವಾಗ ಅಥವಾ ಬಿಡುವಾಗ ಗಾಳಿಯು ಹೂವಿನಿಂದ ಪರಿಮಳವನ್ನು ತೆಗೆದುಕೊಂಡುಹೋಗುವಂತೆ ಇವುಗಳನ್ನು ತೆಗೆದುಕೊಡೊಯ್ಯುವುದು.
    ಈ ಏಕತೆಯ ಪ್ರಜ್ಞೆಯನ್ನು ಪಡೆಯುವುದೇ ಎಲ್ಲ ಯೋಗಗಳ ಗುರಿ. ಇದರ ಬೌದ್ಧಿಕ ಜ್ಞಾನ ಸಾಲದು , ಈ ಸಾರೂಪ್ಯದ ಸಾಕ್ಷಾತ್ಕಾರವಾಗಬೇಕು. ಆಗಲೇ ಪರಮ ಸತ್ಯದ ಪರಮೋಚ್ಚ ಆಧ್ಯಾತ್ಮಿಕ ಅನುಭವ ಸತ್ಯಸ್ಯ ಸತ್ಯವಾಗುವುದು. ಜೀವಾತ್ಮನು ಅಹಂಕಾರ , ಮನಸ್ಸು ಮತ್ತು ಇಂದ್ರಿಯಗಳೊಡನೆ ಒಂದಾಗದಿರುವುದಕ್ಕೆ  ಅಜ್ಞಾನವೇ ಕಾರಣ. ವ್ಯಕ್ತಿಯು ತನ್ನ ನೈಜ ಸ್ವರೂಪವು ದೇಹ ಮನಸ್ಸುಗಳಿಂದ ಬೇರೆಯಾದುದೆಂದು ತಿಳಿದಿದ್ದರೂ ಈ ಅಹಂಕಾರ ಹೋಗುವುದಿಲ್ಲ. ಶ್ರೀರಾಮಕೃಷ್ಣರು ಈ ಅಹಂಕಾರವನ್ನು ಅರಳೀಮರಕ್ಕೆ ಹೋಲಿಸುತ್ತಿದ್ದರು. ಆ ಮರವನ್ನು ಎಷ್ಟು ಬಾರಿ ಕತ್ತರಿಸಿದರೂ ಮತ್ತೆ ಚಿಗುರುವುದು.
     ಈ ಮಿಥ್ಯಾಹಂಕಾರವನ್ನು ಪರಿಶುದ್ಧಗೊಳಿಸಬೇಕು ಮತ್ತು ಆಧ್ಯಾತ್ಮಿಕಗೊಳಿಸಬೇಕು. ಎಲ್ಲ ಯೋಗಗಳ ಪ್ರಧಾನವಾದ ಗುರಿ ಇದು. ಧ್ಯಾನದಿಂದ ದೈಹಿಕ, ಮಾನಸಿಕ ಮತ್ತು ವಾಚಿಕ ಶುಚಿತ್ವವಾಗಿವದು. ಜೀವಾತ್ಮನು ಪರಮಾತ್ನನಿಂದ ಬೇರೆಯಲ್ಲ. ಮನಸ್ಸು ಪರಿಶುದ್ಧವಾದಾಗ ಉಂಟಾಗುವ ಆಧ್ಯಾತ್ಮಿಕ ಅನುಭವದಿಂದ ಈ ಸತ್ಯ  ತಿಳಿದುಬರುವದು.ಆಧ್ಯಾತ್ಮಿಕ ಸಾಧಾನೆಯು ಬೆಳೆಯುವುದು ಪ್ರೀತಿಯಿಂದ ಎಂದು ಎಲ್ಲ ಯೋಗಮಾರ್ಗಗಳೂ ತಿಳಿಸುತ್ತವೆ. ವಿಶ್ವಾತ್ಮನೊಡನಿರುವ  ಏಕತೆಯ ಭಾವದಿಂದ ಸಮಸ್ತ ಮಾನವಕೋಟಿಯೊಡನೆ ಏಕತೆಯ ಭಾವ ಉಂಟಾಗುವುದು. ನಾಮಜಪ ಮತ್ತು ನಿರಂತರ ಭಗವತ್ ಚಿಂತನೆಗಳ ಮೂಲಕ ಭಕ್ತನು ತನ್ನ ಬದುಕನ್ನು ಮಧುರವಾಗಿಸಿಕೊಂಡು ತನ್ನ ಅಹಂಕಾರವನ್ನು ದಿವ್ಯ ಚೈತನ್ಯದಲ್ಲಿ ಲಯಗೊಳಿಸುವನು. ಅಲೆಯು ಸಮುದ್ರದಲ್ಲಿ ಒಂದಾಗುವಂತೆ ಅವನ ವ್ಯಕಿಗತ ಚೈತನ್ಯ ದಿವ್ಯಚೈತನ್ಯದೊಡನೆ ಒಂದಾಗುವುದು. "ನನ್ನ ಮೂಲಸ್ವರೂಪ ಬ್ರಹ್ಮವೇ, ನಾನು ಬ್ರಹ್ಮದಿಂದ ಬೇರೆಯಲ್ಲ " ಎಂಬುದು ಅವನಿಗೆ ಅನುಭವವೇದ್ಯವಾಗುತ್ತದೆ. ಪ್ರತಿಯೊಬ್ಬ ಸಿದ್ಧಪುರುಷನ  ಪರಮಾನಂದದ ಮೂಲವು ಈ ಸಾಕ್ಷಾತ್ಕಾರವೇ. ಪ್ರತಿಯೊಬ್ಬನೂ ಎಲ್ಲ   ಹೃದಯದಲ್ಲಿ ಆಗ ಜೀವನದಲ್ಲಿ ನೊಂದಹೃದಯಕ್ಕೆ ಎಷ್ಟೋ ಶಾಂತಿಯು ಲಭಿಸುವುದು. ಆದ್ದರಿಂದ ಆಧ್ಯಾತ್ಮಿಕ ಅನುಭವ ತನ್ನ ಶಾಂತಿಗೆ ಮಾತ್ರವಲ್ಲದೆ ಬೇರೆಯವರಿಗಾಗಿಯೂ ಅವಶ್ಯಕ.  
 
   ಕಾಡುಹರಟೆ, ಅನಾವಶ್ಯಕ ಕಸುಬು, ವ್ಯರ್ಥಾಲೋಚನೆ ಇವುಗಳಲ್ಲಿ ನಷ್ಟವಾಗುವ ಕಾಲವನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಆಗ ನಮ್ಮ ಅವಶ್ಯಕತೆಗಿಂತ ಹೆಚ್ಚು ಕಾಲ ನಮಗೆ ಸಿಗುವುದು. ಅಭ್ಯಾಸದ ಮೂಲಕ ಆ ಚಿಂತನಶೀಲತೆಯನ್ನು ಬೆರೆಸಿಕೊಂಡರೆ ಎರಡು ಗಂಟೆಯ ಚಿಂತನೆಯನ್ನು ಅರ್ಧ ಗಂಟೆಯಲ್ಲಿಯೇ ಮಾಡಿಮುಗಿಸಬಹುದು. ಎರಡು ಅಂಶಗಳಿವೆ ಮೊತ್ತ ಮತ್ತು ಗುಣ. ಮೊತ್ತವನ್ನು ಹೆಚ್ಚಿಸಲಾಗದಿದ್ದರೆ ಗುಣಮಟ್ಟವನ್ನು ಹೆಚ್ಚಿಸಿ. ನಿಮ್ಮ ಧ್ಯಾನ ಅಧ್ಯಯನಗಳ ಗುಣಮಟ್ಟವನ್ನು ಹೆಚ್ಚಿಸಿ.
  ಧ್ಯಾನ ಜಪ ಪ್ರಾರ್ಥನೆಗಳ ಜೊತೆಗೆ ಕ್ರಮಬದ್ಧವಾದ ಅಧ್ಯಯನವೂ ಇರಬೇಕು. ಆಧ್ಯಾತ್ಮಿಕ ಸಾಧನೆಯ ಅನಂತರ 10 ನಿಮಿಷಗಳಾದರೂ ಉಪನಿಷತ್ತು ಅಥವಾ ಯಾವುದಾದರೂ ಶಾಸ್ತ್ರ ಶಾಸ್ತ್ರ ಪಠನದಲ್ಲಿ ಕಳೆಯಬೇಕು. ಜಡತ್ವ ಮತ್ತು ಆಲಸ್ಯ ಇವೆರಡೂ ಅನೇಕ ರೂಪಗಳಲ್ಲಿ ಆಧ್ಯಾತ್ಮಿಕ ಜೀವನಕ್ಕೆ ತಡೆಯುಂಟುಮಾಡುತ್ತವೆ. ಭೌತಿಕ ಮತ್ತು ಮಾನಸಿಕ ಜಡತ್ವವನ್ನು ಅನೇಕರು ಪ್ರಯತ್ನ ಪೂರ್ವಕವಾಗಿ ಬೆಳೆಸಿಕೊಳ್ಳುತ್ತಾರೆ!  ಈ ರೀತಿಯ ಜಡಸ್ವಭಾವ ಅತ್ಯಂತ ಅಪಾಯಕಾರಿ. ಅದು ನಮ್ಮನ್ನು ಹಿಡಿದುಕೊಂಡಿತೆಂದರೆ  ಆಮೇಲೆ ನಮಗೆ ಸಾಧನೆ ಮತ್ತು ಅಧ್ಯಯನಗಳಿಗೆ ಸಮಯವೇ ಸಿಗುವುದಿಲ್ಲ. ಆಗ ಸಮಯವಿದ್ದರೂ ಅದನ್ನು ಗಮನಿಸುವುದೇ ಇಲ್ಲ, 'ಕಾಲತೀತ' ರಾಗುತ್ತೇವೆ; ಅದನ್ನು ಗಮನಿಸಿದಷ್ಟು ಮಂದಬುದ್ಧಿಯವರಾಗುತ್ತೇವೆ. ಇಂದ್ರಿಯನಿಗ್ರಹವು ಆಳ ಚಿಂತನೆಗೆ ಮತ್ತು ಧ್ಯೇಯಪೂರ್ಣ ಜೀವನಕ್ಕೆ ಸಹಾಯಕ. ಯಾವಾಗಲೂ ಈ ಇಂದ್ರಿಯ ಪ್ರಪಂಚದಲ್ಲೇ ಮುಳುಗಿರುತ್ತೇವೆ? ಇಂದ್ರಿಯಗಳ ಹಿಡಿತಕ್ಕೆ ಬಂದರೆ ಆಗ ವಿಚಾರಸ್ತರದಲ್ಲಿ ನಾವಿರಬಹುದು. ಹೊರ ಪ್ರಪಂಚದಲ್ಲಿ ಹೋಗಿ ಹೊಡೆತ  ಒದೆತಗಳನ್ನು ಏಕೆ ತಿನ್ನುತ್ತಿರಬೇಕು? ಮನೋ ವಿಕ್ಷೇಪಗಳೆಲ್ಲ ಹೋದ ಮೇಲೆ ನಾವು ಅರ್ಥಪೂವ೯ಕವಾಗಿ ಬಾಳಬಹುದು, ಎಲ್ಲಾ ಸಂದರ್ಭಗಳಲ್ಲೂ ಎಷ್ಟು ಸಾಧ್ಯವೋ ಅಷ್ಟು ಜಾಗೃತರಾಗಿರಬಹುದು. ಆದರೆ ಅನೇಕ ಬಾರಿ ಜನರು ಹೊರಗಿನ ವಿಕ್ಷೇಪ ಮತ್ತು ಪ್ರಾಪಂಚಿಕ ಸಾಧನೆಗಳು ಇಲ್ಲವಾದಮೇಲೆ ಕಡ್ಡಿ ಕಲ್ಲುಗಳಂತೆ ಜಡವಾಗುತ್ತಾರೆ. ಆಧ್ಯಾತ್ಮಿಕ ಸಾಧನೆ ಮತ್ತು ಅಧ್ಯಯನಗಳಿಗೆ ಅವರಿಗೆ ಸಮಯವೇ ಇಲ್ಲವಾಗುತ್ತದೆ. ಆದರೆ ಇಂಥ ವಿಚಾರಗಳು ನಮ್ಮಲ್ಲಿ ಬರಬಾರದು ಎಂದರೆ, ಸತತವಾದ ಧ್ಯಾನ ಅಭ್ಯಾಸದಿಂದ ಇಂತಹ ಜಡತ್ವ ದೂರವಾಗುವುದು ನಿಮ್ಮ ಜೀವನ ಮೌಲ್ಯ ಗೊತ್ತಾಗುವುದು.
logo-whatsapp-png-image-2.png

Remove Stress • Improve Relationships • Boost Immunity

 

2hrs/day  for a 5-day 

Monday to Friday 

Time : 5:30 am to 7:30am

5:30pm to 7:30 pm

Fee : 2500Rs/- IND 

More Dealits :  📞      7619637430

ಕುಂಡಲಿನಿ ಯೋಗ

ಧ್ಯಾನ ಶಿಬಿರದಲ್ಲಿ ಕಲಿಸಿಕೊಡುವ ವಿವರಗಳು

1.ಮಾರ್ಗದರ್ಶಿ ಧ್ಯಾನ.

2.ಕುಂಡಲಿನಿ ಯೋಗ ( ಚಕ್ರ ಧ್ಯಾನ ) ಮತ್ತು ಮುದ್ರೆಗಳು.

3. (Quiet meditation) ಶಬ್ದ ರಹಿತ ಧ್ಯಾನ.

4.ಮ್ಯಾನುವಲ್ ಸಿಂಗಿಂಗ್ ಬೌಲ್ ಮೆಡಿಟೇಶನ್.

5.ಕುಂಡಲಿನಿ ಆರೋಹಣ ಅವರೋಹಣ.

6.ಕೆಲವು ಮುಖ್ಯವಾದ ಪ್ರಾಣಾಯಾಮಗಳು.

7.ಕೆಲವು ಅತ್ಯಮೂಲ್ಯವಾದ ಮುದ್ರೆಗಳು.

8.ಒತ್ತಡವನ್ನು ಬ್ಯಾಲೆನ್ಸ್ ಮಾಡುವ ವಿಧಾನ.

9. ಯೋಗ ನಿದ್ರಾ.

10.ಪಠಣ ಧ್ಯಾನ ಭಕ್ತಿ ಯೋಗ ( chanting meditation)

11.ಕುಬೇರ ಮುದ್ರೆ ಆಕ್ಟಿವೇಶನ್

12. ಭಾಗವಹಿಸುವಿಕೆಯ ಪ್ರಮಾಣಪತ್ರ (Participation certificate) Etc

 

 

  ಕುಂಡಲಿನಿ ಯೋಗವು ಒಂದು ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಿಸ್ತು, ಇದು ರಾಜಯೋಗ, ಶಕ್ತಿ ಯೋಗ, ಭಕ್ತಿ ಯೋಗ, ತಂತ್ರ, ಕ್ರಿಯಾ ಯೋಗ, ಲಯ ಯೋಗ, ನಾದ ಯೋಗ ಮತ್ತು ಯೋಗದ ಬೆನ್ನೆಲುಬಾದ ಪತಂಜಲಿ ಯೋಗ ಸೂತ್ರದ ಶ್ರೇಷ್ಠವಾದ ಶಾರೀರಿಕ ಮತ್ತು ಧ್ಯಾನದ ತಂತ್ರಗಳ ಒಕ್ಕೂಟವಿದೆ.[

 

   ಕುಂಡಲಿನಿ ಯೋಗವನ್ನು ಜ್ಞಾನದ ಯೋಗ ಎಂದು ಕರೆಯಲಾಗುತ್ತದೆ, ಏಕೆಂದರೆ ಇದು ನೇರವಾಗಿ ಒಬ್ಬ ವ್ಯಕ್ತಿಯ ಮನಸ್ಸಾಕ್ಷಿಯ ಮೇಲೆ ಪ್ರಭಾವ ಬೀರುತ್ತದೆ, ಒಳ ದೃಷ್ಟಿಯನ್ನು ಬೆಳೆಸುತ್ತದೆ, ಆತ್ಮ ಜ್ಞಾನವನ್ನು ಹೆಚ್ಚಿಸುತ್ತದೆ ಮತ್ತು ಪ್ರತಿಯೊಬ್ಬ ಮನುಷ್ಯನಲ್ಲಿ ಹುದುಗಿರುವ ಅಗಾಧವಾದ ಸೃಜನಾತ್ಮಕ ಶಕ್ತಿಯನ್ನು ಬಿಡುಗಡೆಗೊಳಿಸಲು ಅನುವಾಗುತ್ತದೆ.

1 ಮೂಲಾಧಾರ

2.ಸ್ವಾಧಿಸ್ಠಾನ

3.ಮಣಿಪೂರ

4.ಅನಾಹತ

5.ವಿಶುದ್ಧ

6.ಅಜ್ಞಾ

7 ಸಹಸ್ರಾರ

 

  ಕುಂಡಲಿನಿ ಯೋಗವು ವಿಶೇಷವಾಗಿ ಅಭಿವೃದ್ಧಿ ಹೊಂದಿದ ಆಧ್ಯಾತ್ಮ ವಿಜ್ಞಾನ, ಇದು ಅಸ್ಪಷ್ಟವಾದ ಮತ್ತು ಬಹುಸಂಸ್ಕೃತಿಯ ಇತಿಹಾಸವನ್ನು ಹೊಂದಿದೆ, ಹಿಂದು ಸಂಪ್ರದಾಯದ ಪ್ರಕಾರ ಆಧ್ಯಾತ್ಮಿಕ ಗುರುವಿನ ಮಾರ್ಗದರ್ಶನದಲ್ಲಿ ಮೋಕ್ಷವನ್ನು ಪಡೆಯಲು ನಂಬುವ ತಂತ್ರವಾದ ಶಕ್ತಿಪಥ ಇದಾಗಿದೆ. ಮುಖ್ಯವಾಹಿನಿಯ ಪದ್ಧತಿಗಳು ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸಬಹುದು ಎಂಬುದನ್ನು ತೋರಿಸಿವೆ ಅಲ್ಲದೆ ಮೋಕ್ಷವನ್ನು ಯೋಗ್ಯ ಗುರುವಿನ ಮಾರ್ಗದರ್ಶನವನ್ನು ಅನುಸರಿಸುವ ಮೂಲಕ ಮತ್ತು ಯೋಗದ ತಂತ್ರಗಳನ್ನು ಅಭ್ಯಸಿಸುವ ಮೂಲಕ ಹೊಂದಬಹುದು-ಇದರೊಂದಿಗೆ ಮಂತ್ರ, ಪ್ರಾಣಾಯಾಮ 

ಆಸನಗಳು, (ಉಸಿರಾಟದ ವಿಧಾನಗಳು), ಸಾಧನೆ ಅಭ್ಯಾಸ, ಧ್ಯಾನ, ಭಕ್ತಿ ಮತ್ತು ಪ್ರಾರ್ಥನೆಯ ಮೂಲಕವೂ ಮೋಕ್ಷವನ್ನು ಹೊಂದಬಹುದು.

ಏಕಾಗ್ರತೆ ಮತ್ತು ಧ್ಯಾನ

 

ಏಕಾಗ್ರತೆಯೆಲ್ಲ ಧ್ಯಾನವಲ್ಲ

 

     ಸಾಮಾನ್ಯ ಏಕಾಗ್ರತೆಗೂ ಮತ್ತು ಧ್ಯಾನಕ್ಕೂ ಇರುವ ವ್ಯತ್ಯಾಸವನ್ನು ತಿಳಿಯು ವುದು ಆವಶ್ಯಕ. ಧ್ಯಾನವೆಂದರೆ ವಿಶೇಷ ರೀತಿಯ ಏಕಾಗ್ರತೆ. ಮೊದಲನೆಯದಾಗಿ ಧ್ಯಾನ ಪ್ರಜ್ಞಾಪೂರ್ವಕವಾಗಿ, ಇಚ್ಚಾಪೂರ್ವಕವಾಗಿ ನಡೆಯುವ ಕಾರ್ಯ, ಎರಡನೆಯದಾಗಿ ಧ್ಯಾನವೆಂದರೆ ಒಂದು ಆಧ್ಯಾತ್ಮಿಕ ಭಾವನೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು. ಇದಕ್ಕೆ ಸಾಧಕನು ಪ್ರಾಪಂಚಿಕ ಭಾವನೆಗಳನ್ನು ಮೀರಿ ಹೋಗುವ ಶಕ್ತಿಯನ್ನು ಹೊಂದಿರಬೇಕು. ಕೊನೆಯದಾಗಿ ಧ್ಯಾನ ಮಾಡುವುದು ಯಾವುದಾದರೊಂದು ನಿರ್ದಿಷ್ಟ ಪ್ರಜ್ಞಾಕೇಂದ್ರದಲ್ಲಿ. ಆದ್ದರಿಂದ ನಿಜವಾದ ಧ್ಯಾನ ಬಹಳ ಮುಂದುವರಿದ ಸ್ಥಿತಿ, ಸುದೀರ್ಘ ಸಾಧನೆಯ ಅನಂತರ ದಕ್ಕುವಂತಹುದು.

 

   ಸಾಮಾನ್ಯವಾಗಿ ನಾವು ಯಾವುದನ್ನು ಧ್ಯಾನವೆಂದು ಕರೆಯುತ್ತೇವೊ ಅದು ನಿಜವಾದ ಅರ್ಥದಲ್ಲಿ ಧ್ಯಾನವಲ್ಲ. ಅನೇಕ ಕೆಟ್ಟ ಭಾವನೆಗಳಿಂದ, ಪ್ರವೃತ್ತಿಗಳಿಂದ ಮತ್ತು ಪ್ರಾಪಂಚಿಕ ವಿಷಯಗಳಿಂದ ಮನಸ್ಸು ವಿಕ್ಷೇಪಗೊಳ್ಳುತ್ತದೆ, ಭಗವತ್‌ ಚಿಂತನ ಯಿಂದ ವಿಮುಖಗೊಳ್ಳುತ್ತದೆ. ಮತ್ತೆ ಮತ್ತೆ ಮನಸ್ಸನ್ನು ಒಳಗೆಳೆದು ಭಗವಂತನಲ್ಲಿ ನಿಲ್ಲಿಸುತ್ತ ಹೋಗುವುದು ಹೆಚ್ಚಿನ ಆಧ್ಯಾತ್ಮಿಕ ಸಾಧಕರು ನಡೆಸುವ ಪ್ರಯತ್ನ. ಇದನ್ನೇ ನಾವು ಧ್ಯಾನವೆಂದು ಕರೆಯುತ್ತೇವೆ. ನಿಜವಾಗಿಯೂ ಇದು ಪ್ರತ್ಯಾಹಾರ. ಅದರ ಮುಂದಿನ ಹಂತ ಮನಸ್ಸನ್ನು ಒಂದೇ ವಿಚಾರದಲ್ಲಿ ಸ್ವಲ್ಪ ಕಾಲ ಹಿಡಿದಿರಿಸುವುದು: ಧಾರಣ. ಮನಸ್ಸಿನ ಹೊರಹೋಗುವ ಪ್ರವೃತ್ತಿಯು (ಪರಾಕ್ ಪ್ರವಣತಾ) ನಿಗ್ರಹಿಸಲ್ಪಟ್ಟು ಅದು ಭಗವತ್‌ ಚಿಂತನೆಯಲ್ಲಿ ನಿರಂತರ ತೈಲಧಾರೆಯಂತೆ ಹರಿಯುತ್ತಿದ್ದರೆ ಅದು ನಿಜವಾದ ಧ್ಯಾನ.

 

   ಪ್ರಾಪಂಚಿಕವ್ಯಕ್ತಿ ತನ್ನ ಲಾಭನಷ್ಟಗಳಲ್ಲಿ ಮತ್ತು ತನ್ನ ಸುಖದಲ್ಲಿ ಮನಸ್ಸನ್ನು ಏಕಾಗ್ರಗೊಳಿಸುತ್ತಾನೆ. ವಿಜ್ಞಾನಿ ತನ್ನ ಪ್ರಯೋಗದ ಮೇಲೆ ಮನಸ್ಸನ್ನು ಏಕಾಗ್ರ ಗೊಳಿಸುತ್ತಾನೆ. ಮನಶ್ಯಾಸ್ತ್ರಜ್ಞ ಮಾನಸಿಕವಿಷಯಗಳ ಮೇಲೆ ಮನಸ್ಸನ್ನು ಏಕಾಗ್ರ ಗೊಳಿಸುತ್ತಾನೆ. ಯೋಗಿಯು ಪ್ರಕೃತಿ-ಪುರುಷರ ವಿಶ್ಲೇಷಣೆಯಲ್ಲಿ ಮನಸ್ಸನ್ನು ಏಕಾಗ್ರಗೊಳಿಸುತ್ತಾನೆ. ಇವೆಲ್ಲ ವಾಸ್ತವಿಕ ದೃಷ್ಟಿಯಿಂದ ವಿವಿಧ ಬಗೆಯ ಏಕಾಗ್ರತೆಗಳು. ಅವುಗಳ ವಿಷಯದಲ್ಲಿ ವೈವಿಧ್ಯವಿದೆ-ಅವುಗಳಿಂದ ಉಂಟಾಗುವ ಅನುಭವಗಳು ಮತ್ತು ಪ್ರತಿಫಲ ಬೇರೆ ಬೇರೆಯಾಗಿರುತ್ತವೆ. ಆಧ್ಯಾತ್ಮಿಕ ಸಾಧಕನ ಏಕಾಗ್ರತೆಯೊಂದನ್ನೇ ಧ್ಯಾನವೆಂದು ಕರೆಯುವುದು.

ದೇವರಲ್ಲಿ ನಂಬಿಕೆಯಿಲ್ಲದ ಯೋಗಿ ಮೊದಲು ದೇಶಕಾಲಕ್ಕೆ ಸಂಬಂಧಿಸಿದ ಸ್ಕೂಲ ವಸ್ತುವಿನ ಮೇಲೆ ಧ್ಯಾನ ಮಾಡುತ್ತಾನೆ. ಅನಂತರ ದೇಶಕಾಲವನ್ನು ಮೀರಿದ ವಸ್ತುವಿನ ಮೇಲೆ ಧ್ಯಾನಮಾಡುತ್ತಾನೆ. ಮುಂದೆ ಅವನು ಸೂಕ್ಷ್ಮವಸ್ತುವನ್ನು ಧ್ಯಾನದ ವಿಷಯವಾಗಿ ತೆಗೆದುಕೊಳ್ಳುತ್ತಾನೆ. ಹೀಗೆ ಮುಂದುವರಿದು ಮನಸ್ಸು ಅಥವಾ ಅಂತರಿಂದ್ರಿಯವನ್ನೂ, ಅನಂತರ ಅಹಂಕಾರ(ಅಸ್ಮಿತಾ)ವನ್ನೂ ಧ್ಯಾನದ ವಿಷಯ ವಾಗಿ ತೆಗೆದುಕೊಳ್ಳುತ್ತಾನೆ. ಇವುಗಳೆಲ್ಲದರ ನಿಜವಾದ ಸ್ವರೂಪವನ್ನು ತಿಳಿದು, ಈ ಎಲ್ಲ ಉಪಾಧಿಗಳಿಂದ ತಾನು ಬೇರೆ ಎಂಬುದನ್ನು ಅರಿತು ತನ್ನ ನೈಜ ಆತ್ಮವನ್ನು ಸಮೀಪಿಸಿ ಅದ್ಭುತ ಆನಂದವನ್ನು ಅನುಭವಿಸುತ್ತಾನೆ.

 

    ಈಶ್ವರನನ್ನು ನಂಬುವ ವೇದಾಂತಸಾಧಕನು ಪ್ರಾರಂಭದಲ್ಲಿ ಯಾರಾದರೂ ದಿವ್ಯ ಪುರುಷನ ಭೌತಿಕ ಮೂರ್ತಿಯ ಮೇಲೆ ಅಥವಾ ಯಾವುದಾದರೂ ದಿವ್ಯ ಪ್ರತೀಕದ ಮೇಲೆ ಧ್ಯಾನಮಾಡುತ್ತಾನೆ. ಇಲ್ಲಿಯೂ ಧ್ಯಾನದ ವಿಷಯ ಮೊದಲು ದೇಶಕಾಲಗಳಿಗೆ ಒಳಪಟ್ಟಿರುತ್ತದೆ, ಅನಂತರ ಅವುಗಳನ್ನು ಮೀರಿರುತ್ತದೆ. ಮುಂದುವರಿಯುತ್ತ ದಿವ್ಯ ಪುರುಷನ ಹೃದಯದ ಮೇಲೆ ಅಥವಾ ದಿವ್ಯ ಮನಸ್ಸಿನ ಮೇಲೆ ಧ್ಯಾನ ಮಾಡುತ್ತಾನೆ ಮತ್ತು ಅವುಗಳ ದಿವ್ಯ ಗುಣಗಳನ್ನು ಕ್ರಮೇಣ ತಾನು ಪಡೆಯುತ್ತಾನೆ. ಮುಂದೆ ವ್ಯಷ್ಟಿ ಅಥವಾ ಸಮಷ್ಟಿ ಚೈತನ್ಯವನ್ನು ಕುರಿತು ಧ್ಯಾನಿಸುತ್ತಾನೆ. ಇದರ ಮೂಲಕ ತನ್ನ ಅಶುದ್ಧ ಮತ್ತು ಸೀಮಿತ ಚೈತನ್ಯವನ್ನು ಪವಿತ್ರಗೊಳಿಸಿ ಮತ್ತು ವಿಕಾಸಗೊಳಿಸಿ ತನ್ನೊಳಗಿರುವ ಪರಮ ಪುರುಷನ ಸಂಪರ್ಕ ದನ್ನು ಪಡೆಯುತ್ತಾನೆ. ಇನ್ನೂ ಮುಂದುವರಿದು ಅತ್ಯುನ್ನತ ಆಧ್ಯಾತ್ಮಿಕ ಅನುಭವವನ್ನು ಕಡೆದು, ಉಪ್ಪಿನ ಬೊಂಬೆ ಸಮುದ್ರದಲ್ಲಿ ಕರಗಿಹೋಗುವಂತೆ ಧ್ಯಾನಿಯು ಪರಬ್ರಹ್ಮ ಲ್ಲಿ ಲಯವಾಗುವನು. ಹೀಗೆ ವ್ಯಷ್ಟಿಪ್ರಜ್ಞೆಗೆ ಸಂಬಂಧಿಸಿದ ವಿವಿಧ ಬಗೆಯ ಏಕಾಗ್ರತೆ ಮತ್ತು ಧ್ಯಾನಗಳಿಂದ ಪ್ರಾರಂಭಿಸಿ ಅವನು ಅತ್ಯುನ್ನತ ಪ್ರಜ್ಞಾತೀತ ಸ್ಥಿತಿಯನ್ನು ಹುಟ್ಟುವನು. ಇಲ್ಲಿ ವಿಷಯ-ವಿಷಯಿ ಸಂಬಂಧವಿರುವುದಿಲ್ಲ, ಇದು ಎಲ್ಲ ಪೇಕ್ಷತೆಯನ್ನೂ ಮೀರಿದ ಸ್ಥಿತಿ.

 

   ಕೇವಲ ಏಕಾಗ್ರತೆಗೆ ಯಾವ ಆಧ್ಯಾತ್ಮಿಕ ಮೌಲ್ಯವೂ ಇಲ್ಲದಿರಬಹುದು. -ದಲೇ ಹೇಳಿದಂತೆ ಕೆಲಮಟ್ಟಿಗಾದರೂ ಮನಶುದ್ಧಿಯಿಲ್ಲದೆ, ಮತ್ತು ಆಧ್ಯಾತ್ಮಿಕ ದನೆಯನ್ನು ಮಾಡುತ್ತಿರುವಂತೆಯೇ ದೈವೀಕರಣ ಕ್ರಿಯೆಯನ್ನು ಮುಂದುವರಿಸ ಲೆ ಏಕಾಗ್ರತೆ ಅಪಾಯಕರ. ಮನಸ್ಸು ಪರಿಶುದ್ಧವಾದಷ್ಟೂ ಏಕಾಗ್ರತೆ ಮತ್ತು ಈ ಹೆಚ್ಚು ಪರಿಣಾಮಕಾರಿಯಾಗುವುದು. ತೀವ್ರ ವೈರಾಗ್ಯ ಮತ್ತು ಪಾವಿತ್ರ್ಯವನ್ನು ದಮೇಲೆ ಸಾಧಕನು ಉನ್ನತ ಮಟ್ಟದ ಧ್ಯಾನಾಭ್ಯಾಸವನ್ನು ಅವಲಂಬಿಸಬಹುದು. 

    ಸಾಧಾರಣವಾಗಿ ಎಲ್ಲ ವ್ಯಕ್ತಿಗಳಿಗೂ ಏಕಾಗ್ರತೆಯ ಸಾಮರ್ಥವಿರುತ್ತದೆ, ಆದರೆ ಅದು ಬೇರೆ ವ್ಯಕ್ತಿಗಳ ಕಡೆ ಅಥವಾ ಆಸೆಯ ವಸ್ತುಗಳ ಕಡೆ ಹರಿಯುತ್ತದೆ. ಆಧ್ಯಾತ್ಮಿಕ ಜೀವನವನ್ನು ಅನುಸರಿಸಲು ಯಾವುದೇ ಹೊಸ ಶಕ್ತಿಯನ್ನೂ ಇದ್ದಕ್ಕಿದ್ದಂತೆ ಪಡೆಯಬೇಕಾಗಿಲ್ಲ. ಹಳೆಯ ಸಾಮರ್ಥ ಮತ್ತು ಪ್ರವೃತ್ತಿಗಳನ್ನು ಭಗವನ್ಮುಖ ಗೊಳಿಸಬೇಕು ಅಷ್ಟೇ. ಆಗ ಪ್ರಾಪಂಚಿಕ ವ್ಯಕ್ತಿ ಆಧ್ಯಾತ್ಮಿಕ ವ್ಯಕ್ತಿಯಾಗಿ ಮಾರ್ಪಡುವನು. ನಿಜವಾದ ಭಕ್ತನ ಪ್ರಾರ್ಥನೆ ಇದು: “ಅಜ್ಞಾನಿಗಳು ಈ ಜಗತ್ತಿನ ವಸ್ತುಗಳನ್ನು ಎಷ್ಟು ತೀವ್ರವಾಗಿ ಪ್ರೀತಿಸುತ್ತಾರೆಯೋ ಅಷ್ಟೇ ತೀವ್ರವಾಗಿ ಹೇ ಭಗವಂತ, ನಾನು ನಿನ್ನನ್ನು ಪ್ರೀತಿಸುವಂತಾಗಲಿ. ಆ ಪ್ರೀತಿಯು ಎಂದೆಂದೂ ನನ್ನ ಹೃದಯವನ್ನು ಬಿಟ್ಟು ಕದಲದೆ ಇರುವಂತಾಗಲಿ.

1.jpg
kundalini-yoga.jpg

Please take a moment to fill out the form.

Thanks for submitting!

Book an Appointment

Meditation Worksohp Book here :

Mon 26 May 2025 -  Fri 30 May 2025

Daily : 2 Hours

All age Groups

Kannada , English

Bagalakunte  Bengaluru - 73, Karnataka, India

Available all year round

May 2025
Mon
Tue
Wed
Thu
Fri
Sat
Sun
28
29
30
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
Day (1/5)
Meditation Workshop
+1 more
27
Day (2/5)
Meditation Workshop
+1 more
28
Day (3/5)
Meditation Workshop
+1 more
29
Day (4/5)
Meditation Workshop
+1 more
30
Day (5/5)
Meditation Workshop
+1 more
31
1
2
3
4
5
6
7
8

Payment and  for register make a call : 7619637430

Find us
Subscribe for Updates

Thanks for submitting!

© 2023 by Hamsa yoga foundation

Contact us

777, 1st Floor 60 feet rd, Opp to Vasudeva store, MEI Layout, Vigneshwara Layout, Bagalakunte, Bangalore Karnataka 560073

  • YouTube
  • Facebook - Black Circle
  • Instagram - Black Circle
bottom of page